"Bettale Jagattu" from "Vijaya Karnataka" is my favorite news paper column. Last Saturday (23/05/2009) there was an analysis presented by the author (Shri Pratap Simha) about BJP's defeat in the 2009 elections. The article is available at 2014ರಲ್ಲೂ ಬಿಜೆಪಿ ಸೋಲಿಗೆ ಕಾರಣ ಹುಡುಕಬಾರದು ಅಂದ್ರೆ?. Here I present my response to it:
ನಮಸ್ಕಾರ ಪ್ರತಾಪ ಅವರಿಗೆ,
ಕಳೆದ ಕೆಲವು ವರ್ಷಗಳಿಂದ "ಬೆತ್ತಲೆ ಜಗತ್ತು" ಓದುತ್ತಾ ಬಂದಿದ್ದೇನೆ. ಆ ಖಡ್ಗ ಲೇಖನಿಯ ಪ್ರಖರತೆ ಮತ್ತು ವೈಚಾರಿಕ ಸ್ಪಷ್ಟತೆ "ವಿಜಯ ಕರ್ನಾಟಕ"ದ ಶನಿವಾರದ ಸಂಚಿಕೆಗಾಗಿ ಕಾಯುವಂತೆ ಮಾಡುತ್ತವೆ.ಇವತ್ತಿನ (23/05/2009) ಲೇಖನ ಓದಿ ಮನಸ್ಸಿಗೆ ಬೇಸರವಾಯ್ತು, ಬೆತ್ತಲೆ ಜಗತ್ತಿನಲ್ಲಿ ದ್ವಂದ್ವಕ್ಕೆ ಅವಕಾಶವಿದೆಯೇ? ಎಂಬ ಪ್ರಶ್ನೆ ಮನಸ್ಸಿನಲ್ಲಿ ಹುಟ್ಟಿತು.
ಹದಿನೈದು ಕೋಟಿ "ಅಲ್ಪಸಂಖ್ಯಾತರ" (!!!) ತುಷ್ಟೀಕರಣಕ್ಕೆ ರಾಷ್ಟ್ರವಿಭಜಕ ಕಾಂಗ್ರೆಸ್ಸಿಗರು ಬಳಸುವ ಪದವೇ "inclusive politics"! ಅಮೇರಿಕದ ಕಪ್ಪುಕ್ರಾಂತಿ ಮತ್ತು ಒಬಾಮೋದಯಗಳ ಉದಾಹರಣೆಗಳನ್ನು ಬಳಸಿಕೊಂಡು ಭಾಜಪವನ್ನೂ ಈ ತಪ್ಪುದಾರಿಗೆಳೆಯುವ ಪ್ರಯತ್ನ ಇಂದಿನ ಲೇಖನದಲ್ಲಿ ಕಂಡುಬಂತು. ಭಾಜಪ ಮತ್ತು ಅಡ್ವಾಣಿ ಜೀ ಹೇಳಿದ್ದು ಭಾರತ ಎಲ್ಲ ಭಾರತೀಯರಿಗೂ ಸೇರಿದ್ದು, ಅವರಿವರಿಗೆ ವಿಶೇಷ ಪರಿಗಣನೆ ಸಲ್ಲ ಎಂದು. ಮನಮೋಹನ ಸಿಂಘ್ ಹೇಳಿದ್ದು ರಾಷ್ಟ್ರದ ಸಂಪತ್ತಿನ ಮೇಲೆ ಮೊದಲ ಹಕ್ಕು ಮುಸ್ಲೀಮರದ್ದು ಎಂದು. ಈ ದೇಶದ ಜನತೆ/ಪ್ರಜಾಪ್ರಭುತ್ವ ಇವರಲ್ಲಿ ಯಾರನ್ನು ಇತ್ತೀಚೆಗೆ ಆಯ್ದುಕೊಂಡಿತು ಎಂಬುದು ನಿಮಗೂ ತಿಳಿದಿರುವ ವಿಷಯ. ಸಿಂಘ್ ಮುಂತಾದವರ ಹೇಳಿಕೆಗಳೂ, ಸಚ್ಚರ್ ಸಮಿತಿಯ ನಾಟಕವೂ ಒಂದು ಕೋಮನ್ನು ಒಗ್ಗೂಡಿಸಿದ್ದರಿಂದ ಕಳೆದ ಐದು ವರ್ಷಗಳಲ್ಲಿ ಏನನ್ನೂ ಸಾಧಿಸದ ಸರಕಾರವೊಂದು ಪುನಃ ಅದಿಕಾರದ ಚುಕ್ಕಾಣಿ ಹಿಡಿಯುವಂತಹ ದುರದ್ರಷ್ಟಕರ ಸನ್ನಿವೇಶ ಇಂದು ದೇಶಕ್ಕೆ ಒದಗಿಬಂದಿದೆ. ಅದೇ, ಹಿಂದೂಗಳು ಸಂಘಟಿತರಾಗಿ ಮತನೀಡಲು ಒಂದು ಕಾರಣವನ್ನಾದರೂ ನೀಡಿ! ಆಗ ಆಗ್ರಾದಲ್ಲಿ ಭಾರತ-ಪಾಕಿಸ್ತಾನದ ಪ್ರೇಮಸಂಧಾನವನ್ನು ಮಾಡಿಸಲು ಪ್ರಯತ್ನಿಸಿದ, ಚುನಾವಣೆ ಮುನ್ನ ಇಫ್ತಾರ್ ಆಯೋಜಿಸಿದವರನ್ನು ಹಿಂದೂಗಳು ನಂಬಲಿಲ್ಲ. ಈಗಲೂ ಸಹ ಝಿನ್ನಾನನ್ನು ಗುಣಗಾನ ಮಾಡಿದವರಿಗೆ, ರಾಮಮಂದಿರ ಪುನರ್ನಿರ್ಮಾಣವನ್ನು ಪ್ರಣಾಳಿಕೆಗೆ ಮಾತ್ರ ಸೀಮಿತಗೊಳಿಸಿದವರಿಗೆ ಹಿಂದೂಗಳು ಸರಿಯಾದ ಪಾಠವನ್ನೇ ಕಲಿಸಿದ್ದಾರೆ. ಲೋಕಸಭೆಯಲ್ಲಿ ಸಾಮರ್ಥ್ಯವು 2ರಿಂದ 84ಕ್ಕೆ ಏರಿದ್ದು ಹಿಂದುತ್ವದಿಂದ, ಹಿಂದೂ identity politicsನಿಂದ ಎನ್ನುವದನ್ನು ಭಾಜಪ ಮರೆತಿದ್ದರಿಂದ ಪಕ್ಷ ಈ ರೀತಿ ಬೆಲೆ ತೆರಬೇಕಾಗಿ ಬಂದಿದೆ. ಅಮೇರಿಕ ಮತ್ತು ಭಾರತ ದೇಶಗಳ ಸಾಮಾಜಿಕ ಸಂಯೋಜನೆಯು ತುಂಬಾ ಭಿನ್ನವಾಗಿದ್ದು ಅಲ್ಲಿನ ರಾಜಕೀಯ ತತ್ವಗಳು ಇಲ್ಲಿ ಅನ್ವಯವಾಗುವದು ಕಠಿಣ. ಇಲ್ಲಿನ ರಾಜಕೀಯ ನಡೆಯುವದೇ ಸಾಮಾಜಿಕ ವಿಭಜನೆಯಿಂದ - ಮುಸ್ಲೀಮ್ - ಕ್ರೈಸ್ತರಿಗೊಂದು ಪಕ್ಷ, ದಲಿತೋದ್ಧಾರಕ ಎಂಬ ಹಣೆಪಟ್ಟೆ ಕಟ್ಟಿಕೊಂಡು ಆನೆಯೊಂದು ಓಡಾಡುತ್ತದೆ, ಹೊಸ ರಾಜ್ಯ ನಿರ್ಮಿಸಲೊಂದು ಪಕ್ಷ, ಹೀಗೆ ಇತ್ಯಾದಿ. ಎಲ್ಲರೂ ಮಾಡುತ್ತಿರುವದು identity politicsನ್ನೆ; ಬಾಜಪ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಹಿಂದುವಾದಿ ರಾಜಕೀಯಕ್ಕೆ ಮರಳಲೇಬೇಕು.
ಭಾಜಪ ಅಫ್ಜಲ್ ಹೆಸರನ್ನೆತ್ತಬಾರದಾದರೆ, ಬಾಂಗ್ಲಾದೇಶದಿಂದ ಕಾನೂನುಬಾಹಿರವಾಗಿ ನುಸುಳಿರುವ ಕೋಟಿಗಟ್ಟಲೇ ಮುಸ್ಲೀಮರ ವಿಷಯವನ್ನು ಪ್ರಸ್ತಾಪಿಸಬಾರದೆನ್ನುವದಾದರೆ, ಅಮರನಾಥ ಯಾತ್ರಿಗಳಿಗೆ ಸೌಲಭ್ಯಗಳು ಸಿಗದಂತೆ ಮಾಡಲು ನಾಚಿಕೆಗೇಡು ಪ್ರತಿಭಟನೆ ಮಾಡಿದ ಕಾಶ್ಮೀರದ ಮುಸ್ಲೀಮರ ವರ್ತನೆಯ ವಿರುದ್ಧ ದನಿಯೆತ್ತಬಾರದಾದರೆ, ಜಿಹಾದಿ ಭಯೋತ್ಪಾದನೆ ದೇಶಕ್ಕೆ ಮಾರಕವೆನ್ನಬಾರದೆಂದಾದರೆ, ಮದರಸಾ ಮತ್ತು ಚರ್ಚಗಳಲ್ಲಿ ನಡೆಯುವ ರಾಷ್ಚ್ರವಿರೋಧಿ ಚಟುವಟಿಕೆಗಳನ್ನು ಕಂಡೂಕಾಣದಂತಿರಬೇಕೆನ್ನುವದಾದರೆ, ಈ ದೇಶಕ್ಕೆ ಭಾಜಪದ ಅವಶ್ಯಕತೆ ಇದೆಯೇ?
ತಮಿಳುನಾಡು, ಆಂಧ್ರ, ಮತ್ತು ಬಂಗಾಲಗಳಲ್ಲಿ ಪಕ್ಷವೇ ಇಲ್ಲದಿರುವದು,
ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಬಲಪಡಿಸುವದನ್ನು ಬಿಟ್ಟು ಕ್ಷೇತ್ರೀಯ ಪಕ್ಷವನ್ನು ಸೆಳೆದರಾಯಿತೆಂಬ ಧೋರಣೆ ತಳೆದಿದ್ದು,
ಮಾಧ್ಯಮದ ಪಕ್ಷಪಾತಿ ವರ್ತನೆ,
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಾಖಂಡಗಳಲ್ಲಿ ತೋರಿದ ನಿರ್ಲಕ್ಷ್ಯಇವು ನನ್ನ ಅಭಿಪ್ರಾಯದಲ್ಲಿ ಭಾಜಪದ 2009ರ ಸೋಲಿಗೆ ಮುಖ್ಯ ಕಾರಣಗಳು. ಹಿಂದುತ್ವದ ತಳಹದಿಯ ಮೇಲೆಯೇ ಈ ದೋಷ ಮತ್ತು ದೌರ್ಬಲ್ಯಗಳನ್ನು ಸರಿಪಡಿಸಿಕೊಂಡಲ್ಲಿ 2014ರಲ್ಲಿ ಸೋಲಿನ ಕಾರಣ
ಹುಡುಕುವದಕ್ಕಾಗಿ ಬೈಠಕ್ ನಡೆಸುವ ಅಗತ್ಯ ಬೀಳಲಿಕ್ಕಿಲ್ಲ.
ಕ್ಷಣಕ್ಷಣವೂ ನಮ್ಮ ರಾಷ್ಟ್ರದ ಕೆಡುಕನ್ನೇ ಬಯಸುವ ಪಾಕಿಸ್ತಾನದ ಬಗ್ಗೆ ನಮ್ಮ ದೇಶದ ಮುಸ್ಲೀಮರಿಗೆ Soft Corner ಇದೆ ಎಂದು ಬರೆಯುವ ಎದೆಗಾರಿಕೆ ಇರುವ ಈ ದೇಶದ ತೀರಾ ಅಲ್ಪಸಂಖ್ಯಾತ ಪತ್ರಕರ್ತರಲ್ಲಿ ನೀವೂ ಒಬ್ಬರು; ಕನ್ನಡ ಸುದ್ದಿಮಾಧ್ಯಮದ ಸಿಂಹ ಎಂದೆಂದೂ ಹೀಗೆಯೇ ನಿರ್ಭಿಡೆಯಿಂದ ಬರೆಯುತಿರಲಿಎಂದು ಆಶಿಸುತ್ತೇನೆ.
--ತಮ್ಮ ಅಭಿಮಾನಿ ಓದುಗ