Sunday, March 9, 2014

Modi - Hope of Development

Following is a Kannada poem penned by my friend on Shri Narendra Modi:

ಅಭಿವೃದ್ದಿಯ ಆಶಾಕಿರಣ
---------------------------

ಕೆಲವರಿಗೆ ಈತ ದೆಶೋದ್ದಾರಕ  ಮುಖಂಡ,
ಮತ್ತಿಷ್ಟು ಜನರಿಗೆ ಪ್ರಚಾರ-ಪ್ರಿಯ ಪ್ರಚಂಡ,
ಮಗಧಿಷ್ಟು ಮಂದಿಗೆ ಅಲ್ಪಸಂಖ್ಯಾತರ ಶತ್ರು,
ಉಳಿದವರಿಗೀತ  ಅಪ್ರತಿಮ ವಾಕ್ಪಟು,

ಪ್ರಧಾನಿಯದರೀತ ಬಿಡುವರ೦ತೆ ಗಣ್ಯರೊಬ್ಬರು ದೇಶ,
ತಡೆಯಲು ವಿರೋದಿಗಳು ಹಾಕುವರು ನಾನ ವೇಷ,
ಇವರ ಮಾತು ಕೇಳಲು ದುಡ್ಡು ಕೊಡುವರದೆಷ್ಟು ಮಂದಿ,
ಹೋದಲ್ಲೆಲ್ಲ ಸೇರುವರು ಜನ ಸಾಗರೋಪಾದಿ,

ದೇಶಕ್ಕಿರುವ ಅಭಿವೃದ್ದಿಯ ಏಕೈಕ ಆಶಾಕಿರಣ ,
ಗೆಲ್ಲಿಸಲು ಇವೆ ಇನ್ನು ನಾನ ಕಾರಣ,
ಟ್ವಿಟ್ಟರ್ನಲ್ಲಿದೆ ದೊಡ್ಡದ್ಹೊಂದು ಪರ - ವಿರೋದಿ ಸೇನೆ,
ನೋಡುವ ಹಾಡುವರೆ ನಮ್ಮ ಸಮಸ್ಯೆಗಳಿಗೆ ಕೊನೆ,

ಸಧ್ಯಕ್ಕೆ ಭರತ ನಾಡಿನಲ್ಲೊಂದೆ ಮಂತ್ರ
ನಮೋ ನಮಃ ನಮೋ ನಮಃ,
ಮಂತ್ರ ಫಲಿಸಿ ಉದುರುವುದೇ 'ಕೈ',
ತಿಳಿಸುವುದು ಶೀಘ್ರ ಮತದಾರನ ಶಾಯಿ.